Index   ವಚನ - 553    Search  
 
ಈ ಅಜ್ಞಾನವು ಸಂಸಾರದ ಮೊಳಕೆಗೆ ಕಾರಣವಾಗಿ ಮಲವೆಂದು ಹೇಳುವರು. ಆ ಮಲವೆನಿಸಿಕೊಂಬ ಅಜ್ಞಾನವೆ ತಮವೆನಿಸಕೊಂಬದು. ಆ ತಮಸಿನೊಡನೆ ಕೂಡಿದಾತನು ತಾಮಸನಂದು ಹೇಳುವರು, ಜ್ಞಾನಹೀನ ಗುರುವನು ತಾಮಸ ಶಿಷ್ಯನು ಎಯ್ದಿ ಹೇಗೆ ಮುಕ್ತಿಯನೈದುವನು? ಒಡೆದಂಥ ಹಡಗನು ಏರಿದಾತನು ಹೇಂಗೆ ಸಮುದ್ರವ ದಾಂಟುವನು? ಅಜ್ಞಾನ ಗುರು ತಾಮಸ ಶಿಷ್ಯಂಗೆ ಅನುಗ್ರಹವ ಮಾಡಿದರೆ ಮುಕ್ತಿ ಎಂತಪ್ಪುದು? ಅಂಧಕ ಅಂಧಕನ ಕೈವಿಡಿದು ಕಮರಿಯ ಬಿದ್ಧಂತಯ್ಯ ಶಾಂತವೀರೇಶ್ವರಾ