Index   ವಚನ - 562    Search  
 
ಆಧಾರಚಕ್ರದಲ್ಲಿರುವ ಕೆಂಪುವರ್ಣ ‘ವಶಷಸ’ ಎಂಬ ನಾಲ್ಕಕ್ಷರವನು ಆಚಾರಲಿಂಗವನು, ಸ್ವಾಧಿಷ್ಠಾನಚಕ್ರದಲ್ಲಿರುವ ನೀಲವರ್ಣ ‘ಬಭಮಯರಲ’ ಎಂಬ ಷಡಕ್ಷರವನು ಗುರುಲಿಂಗವು, ಮಣಿಪೂರಕಚಕ್ರದಲ್ಲಿರುವ ‘ಡಢಣತಥದಧನಪಫ’ ಎಂಬ ದಶಕ್ಷರವನು ಕುಂಕುಮ ವರ್ಣ ಶಿವಲಿಂಗವನು, ಅನಾಹತಚಕ್ರದಲ್ಲಿರುವ ಪೀತವರ್ಣ ‘ಕ ಖ ಗ ಘ ಙ ಚ ಛ ಜ ಝ ಞ ಟ ಠ ‘ ಎಂಬ ದ್ವಾದಶಾಕ್ಷರವನು ಜಂಗಮಲಿಂಗವನು, ವಿಶುದ್ಧಿಚಕ್ರದಲ್ಲಿಯ ಶ್ವೇತವರ್ಣ ‘ಅ ಆ ಇ ಈ ಉ ಋ ಋ ಲೃ ಲೂ ಏ ಐ ಓ ಔ ಅಂ ಅಃ’ ಷೋಡಶಾಕ್ಷರವನು ಪ್ರಸಾದಲಿಂಗವನು, ಆಜ್ಞೇಯಚಕ್ರದಲ್ಲಿಯ ಮಾಣಿಕ್ಯ ವರ್ಣ ‘ಹಂ ಕ್ಷ ಹಂ ಳ’ ಎಂಬ ಅಯ್ವತ್ತೆರಡಕ್ಷರವರಿದಡೆ ಬೋಳು ಮನಸ್ಸು ಲಿಂಗದಲ್ಲಡಗಿದುದೆ ದಿಗಂಬರ, ಆವ ತೆರದಿಂ ದ್ರವ್ಯ ದೊರೆಯಲು ಬಿಡುವುದೇ ನಿರಾಶೆ, ತ್ರಿವಿಧಾವಸ್ಥೆಯಲ್ಲಿಯ ಸುಖವನು ರತಿ ಕ್ರೀಡೆ ರೂಪರುಚಿ ತೃಪ್ತಿಗಳನು ಲಿಂಗಕ್ಕರ್ಪಿಸಿ ಕೊಳ್ವುದೆ ಬ್ರಹ್ಮಚರ್ಯೆಯಯ್ಯ ಶಾಂತವೀರೇಶ್ವರಾ