Index   ವಚನ - 563    Search  
 
ಸಮುದ್ರಂಗಳಲ್ಲಿ ಕ್ಷೀರಸಮುದ್ರವೆ ಶ್ರೇಷ್ಠ. ಪರ್ವತಂಗಳಲ್ಲಿ ಹೇಮಾದ್ರಿಯೆ ಅಧಿಕ. ನವಗ್ರಹಂಗಳಿಗೆ ಸೂರ್ಯನೆ ಅಧಿಕ. ರತ್ನಂಗಳಿಗೆ ಕೌಸ್ತುಭವೆ ಶ್ರೇಷ್ಠ.. ದೇವತೆಗಳಲ್ಲಿ ಪರಮೇಶ್ವರನೆ ಶ್ರೇಷ್ಠ. ವೃಕ್ಷಂಗಳಲ್ಲಿ ಚಂದನವೆ ಶ್ರೇಷ್ಠ. ಪಾಕೃತ ಸ್ವಭಾವ ಶಿಷ್ಯರುಗಳಿಗೆ ಶಿವಲಿಂಗದಲ್ಲಿ ತತ್ಪರನಾದ ಶ್ರೀಗುರುಸ್ವಾಮಿಯೇ ಪೂಜ್ಯನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಸುಜ್ಞಾನವನು ನಿರಸನವ ಮಾಡಿ ತನ್ನ ಸ್ವರೂಪವನು ತಿಳಿದು ಜ್ಞಾನಸ್ವರೂಪವಾದ ಸರ್ವಾಂಗ ಉಳ್ಳ ಶರಣಂಗೆ ಮಹಾಜ್ಞಾನ ಚಾರಿತ್ರವೆ ಚರಿತ್ರವಲ್ಲದೆ ಅಜ್ಞಾನದಿಂದ ಹೊರತಾದ ದುಃಶೀಲ ಚರಿತ್ರಂಗಗಳಿಲ್ಲವೆಂದು ತೋರುತ್ತಿರಲಾಗಿ ಮುಂದೆ ‘ಶೀಲಸಂಪಾದನೆಯ ಸ್ಥಲ’ವಾದುದು.