Index   ವಚನ - 569    Search  
 
ಒರತೆಯ ನೀರ ಕುಡಿದರೇನು ಶೀಲವಂತನಾಗುವನೆ? ಮಲತ್ರಯವ ಜ್ಞಾನೋದಕದಿಂದ ತೊಳೆದರೆ ಶೀಲವಂತ ಕಾಡಗಟ್ಟೆಯ ನೀರು ಕುಡಿದರೇನು ಶೀಲವಂತನೆ? ಅಲ್ಲ; ಕರಣೇಂದ್ರಿಯಂಗಳಲ್ಲಿ ಸಂಬಂಧವನರಿದೊಡೆ ಶೀಲವಂತ. ಉಳ್ಳಿ ನುಗ್ಗಿಯ ಬಿಟ್ಟರೇನು ಶೀಲವಂತನೆ? ಅಷ್ಟಮದಂಗಳ ದುರ್ವಾಸನೆಯನಳಿದೊಡೆ ಶೀಲವಂತ. ಸಪ್ಪೆಯನುಂಡರೆ ಶೀಲವಂತನೆ? ಸ್ತ್ರೀಸಂಗವ ಬಿಟ್ಟರೆ ಶೀಲವಂತ. ಅನ್ಯ ಭಕ್ತಪವಾದವ ಲಾಂಛನದ ಮೇಲೆ ನುಡಿಯದೆ, ಸತ್ಯ ಸದಾಚಾರಿಯಾಗಿ ಗುರುಲಿಂಗ ಜಂಗಮವೆ ಸಾಕ್ಷಾತ್ ಶಿವನೆಂದರಿದು, ತ್ರಿವಿಧದಲ್ಲಿ ವಂಚನೆಯಿಲ್ಲದಿದ್ಧರೆ ಶೀಲವಂತನಯ್ಯ ಶಾಂತವೀರೇಶ್ವರಾ