Index   ವಚನ - 571    Search  
 
‘ಸಕಲವು ಹಸ್ತಸ್ಪರ್ಶದಿಂದ ಶುದ್ದವಹುದು’, ಹಸ್ತಸ್ಪರ್ಶನವಿಲ್ಲೆದೆ ವ್ರತಸ್ಥರು ಮೊದಲಾದ ದೇವ ಭಕ್ತರು ಭುಂಜಿಸಲು ದೋಷವೆಂದುದು ಆಗಮ. ಅದು ಕಾರಣ ಹಸ್ತಸ್ಪರ್ಶವ ಮಾಡುವಾತನು ಭಸ್ಮಲೇಪದಿಂದ ಕೂಡಿದ ಹಸ್ತದಿಂದ ಚರಮೂರ್ತಿಯ ಪಾದಕ್ಕೆ ನಮಸ್ಕರಿಸಲು ಆ ಚರಮೂರ್ತಿ ಪಂಚಾಕ್ಷರಿ ಮಂತ್ರದೊಡಗೂಡಿ ಪಂಚಾಂಗುಲಿಗಳುಳ್ಳ ಭಸ್ಮಲೇಪನ ಹಸ್ತಲೇಪನ ಹಸ್ತದಿಂದ ಮುಟ್ಟುವುದಯ್ಯ ಶಾಂತವೀರೇಶ್ವರಾ