Index   ವಚನ - 572    Search  
 
ವ್ರತಸ್ಥರು ಮೊದಲಾದ ವೀರಶೈವರು ಚರ್ಮ ಪಾತ್ರೆಯಲ್ಲಿಯ ಜಲ ತೈಲಂಗಳಂ ಮುಟ್ಟಲಾಗದು. ಅಥವಾ ತೆಗೆದುಕೊಂಡರೆ ರೌರವ ನರಕವನೆಯ್ದುವರು. ಜಲವ ಮುಟ್ಟದೆ ತೈಲ ಮಾತ್ರವೆ ಹಸ್ತಸ್ಪರ್ಶದಿಂದ ಶುದ್ಧವ ಮಾಡಿಕೊಂಬುದು. ಕಂಡು ಕಂಡು ಕೊಳಲಾಗದಯ್ಯ ಶಾಂತವೀರೇಶ್ವರಾ