ಪಿಂಡ ಬ್ರಹ್ಮಾಂಡವು ಜ್ಞಾನಸ್ವರೂಪವಾಗಿ ಪ್ರಕಾಶಿಸುವುದು.
ಆ ಜ್ಞಾನದಿಂದೆ ಹೊರತಾಗಿ ಆವುದು ಇಲ್ಲ.
ಜ್ಞಾನಿಗಳಾದ ಲಿಂಗೈಕ್ಯರಿಗೆ ಮಾಯಾ ಪ್ರಪಂಚುಗಳಿಂದೇನು
ಪ್ರಯೋಜನವಯ್ಯ?
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಮಹಾಲಿಂಗದಲ್ಲಿ ಐಕ್ಯವಾದ ಏಕಭಾಜನ ಉಳ್ಳ ಲಿಂಗೈಕ್ಯನು ಆ ಮಹಾಲಿಂಗದಲ್ಲಿ ಸಮರಸಭಾವದಿಂದ ಪರಮಾನಂದಸುಖದಲ್ಲಿ ಸುಖಿಯಾದ ಭೇದವು ಎಂತೆಂದೊಡೆ ಮುಂದೆ ‘ಸಹಭೋಜನಸ್ಥಲ’ವಾದುದು.