Index   ವಚನ - 614    Search  
 
ಜ್ಞಾನವೆ ದೇಹವಾಗುಳ್ಳ ಶಿವಲಿಂಗೈಕ್ಯನು ಶಿವಲಿಂಗದಾಚಾರ ಉಳ್ಳಾತನು, ಲೋಕದೊಳಗೆ ವರ್ತಿಸುವಾತನಲ್ಲ, ಸಮಸ್ತವು ಪರಬ್ರಹ್ಮಮಯವು. ಆತನು ಲಿಂಗದೊಡನೆ ಕೂಡಿ ಅನುಭವಿಸುತ್ತಿಹನಯ್ಯ ಶಾಂತವೀರೇಶ್ವರಾ