Index   ವಚನ - 616    Search  
 
ಲಿಂಗ ಪಾತ್ರೆಯಲ್ಲಿ ಸಹಭೋಜನವ ಮಾಡುವ ತಾಮಸರು ತಾವೆ ಲಿಂಗವೆಂಬರು; ತಾವೆ ಲಿಂಗವಾದೊಡನೆ ಸೃಷ್ಠಿ ಸ್ಥಿತಿ ಸಂಹಾರವೆಂಬ ಸಂಸಾರವಿಲ್ಲದಿರಬೇಕು. ಮಹಾಜ್ಞಾನಿಗಳೆಂದು ಲಿಂಗಪಾತ್ರೆಯಲ್ಲಿ ಸಹಭೋಜನವ ಮಾಡುವದೆಂತಾದೀತಯ್ಯ ಶಾಂತವೀರೇಶ್ವರಾ