Index   ವಚನ - 618    Search  
 
ಲಿಂಗಭೋಜನದಲ್ಲಿ ಸಹಭೊಜನವ ಮಾಡುವೆವೆಂಬರ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆಸೆಯುಳ್ಳನ್ನಕ್ಕ ಲಿಂಗ ಭಾಜನದಲ್ಲಿ ಸಹಭೋಜನವ ಮಾಡುವದೆಂತಯ್ಯ? ಹಸಿವು ತೃಷೆ ನಿದ್ರೆ ಜಡವಿಷಯ ವ್ಯಸನಗಳುಳ್ಳಾತಂಗೆ ಲಿಂಗದೊಡಗೂಡಿ ಭೋಜನವ ಮಾಡುವದೆಂತಯ್ಯ? ಗುರು ಲಿಂಗ ಜಂಗಮ ಒಂದೆ ಎಂದು ಅರಿದಾತಂಗೆ ಅಲ್ಲದೆ ಸಹಭೋಜನ ಸಲ್ಲದಯ್ಯ ಶಾಂತವೀರೇಶ್ವರಾ