Index   ವಚನ - 619    Search  
 
ಗುರು ಶಿಷ್ಯರು ಸಹಪಂಕ್ತಿಯಲ್ಲಿ ಲಿಂಗಾರ್ಚನೆಯನು ಅಡ್ಡಣಿಗೆಯಲ್ಲಿ ಪಾತ್ರೆಯನಿಟ್ಟುಕೊಂಡು ಭೋಜನವ ಮಾಡಲಾಗದು. ಅದೇನು ಕಾರಣ[ವೆಂದರೆ], ಗುರು ಶಿಷ್ಯರೆಂಬ ಭಿನ್ನವಿಲ್ಲದಿರ್ದೋಡೆ ಮಾಡಬಹುದಯ್ಯ ಶಾಂತವೀರೇಶ್ವರಾ