Index   ವಚನ - 620    Search  
 
ಇನ್ನು ಪವಿತ್ರರಲ್ಲದಯೋಗ್ಯರನುಳಿದದು ಲಿಂಗಾಂಗ ಸಮರಸ ಜ್ಞಾನಿಗಳಾದ ಯೋಗ್ಯರ್ಗೆ ಲಿಂಗಸಹಭೊಜನಮಂ ಪೇಳ್ವೆನೆಂತನೆ: ಗ್ರಂಥ: ‘ಶ್ರೀಗುರು ಪತಿರಾಖ್ಯಾತಃ ಶ್ರೀಪತಿ ರೂಪ ಭಾಸ್ಪರಃ ತತಃ ಪಿತ್ರೋ ಪ್ರಸಾದಾನ್ನಃ ದೇಯ ಶ್ರೀಲಿಂಗ ರೂಪಿಣೆ’ ಜನನಿ ಜನಕರು ತಮ್ಮ ಉದರದಲ್ಲಿ ಜನಿಸಿದ ಶಿಶುಗಳೊಡನೆ ಸಹಭೋಜನವ ಮಾಡುವಂತೆ, ಗುರುಶಿಷ್ಯರು ಸತಿಪತಿಗಳ ಹಸ್ತ ಮಸ್ತಕ ಸಂಯೋಗದಿಂದ ಹುಟ್ಟಿದ ಲಿಂಗಪ್ರಸಾದ ಶರಣಂಗೆ ಯೋಗ್ಯವಾದ ಕಾರಣ ಲಿಂಗಸಹಭೋಜನ ಸಲ್ವುದಯ್ಯ ಶಾಂತವೀರೇಶ್ವರಾ