Index   ವಚನ - 621    Search  
 
ನಾದವೆ ಗುರು ಮುಖ, ಬಿಂದುವೆ ಲಿಂಗ ಮುಖ. ಕಳೆಯ ಚರ ಮುಖವೆಂದರಿದು ಮೋಕ್ಷ ರತ್ನತ್ರಯ ಯುಕ್ತದಿಂ ಗುರು ಲಿಂಗ ಜಂಗಮ ಸ್ವರೂಪವಾದ ಇಷ್ಟ ಪ್ರಾಣ ಭಾವ ಲಿಂಗಗಳಿಗೆ ರೂಪು ರುಚಿ ತೃಪ್ತಿ ಪದಾರ್ಥವನರ್ಪಿಸಿ ಆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವನು ಸ್ವೀಕರಿಸುವಾತನೆ ಪ್ರಸಾದಿಯಯ್ಯ ಶಾಂತವೀರೇಶ್ವರಾ