Index   ವಚನ - 636    Search  
 
ಗ್ರಂಥ: ಓಮಿತ್ಯಾಖ್ಯ ಸ್ವರೂಪಾಯ| ತ್ವಂ ಪದಾಂಗ ನಿವಾಸನೆ| ತತ್ಪದ ಬ್ರಹ್ಮರೂಪಾಯ ಶಾಂತವೀರಾಯ| ನಮಃ || ಎಂದು ಓಂಕಾರವೆಂಬಭಿಧಾನವುಳ್ಳ ಪ್ರಣವ ಸ್ವರೂಪವಾದ ಪಿಂಡ ಬ್ರಹ್ಮಾಂಡಾತ್ಮಕವಾದ ತ್ವಂ ಪದ ವಾಚ್ಯವಾದ ನಾಲ್ವತ್ತನಾಲ್ಕಂಗಸ್ಥಲ ಗರ್ಭಿತವಾದ ಆರಂಗಸ್ಥಲದಲ್ಲಿ ಚೈತನ್ಯ ಸ್ವರೂಪವಾಗಿದ್ದ ತತ್ಪದ ಷಟಸ್ಥಬ್ರಹ್ಮ ಸ್ವರೂಪವಾದ ಶ್ರೀ ಗುರುದೇವನೆ ನಿನಗೊಸ್ಕರ ನಮಸ್ಕಾರವಯ್ಯ ಶಾಂತವೀರೇಶ್ವರಾ ಸೂತ್ರ: ಇದೆ ಪ್ರಕಾರದಿಂದ ಅಂಗಸ್ಥಲ ನಾಲ್ವತ್ತನಾಲ್ಕರ ಭೇದವು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಸಾದಿ ಪ್ರಾಣಲಿಂಗ ಶರಣ ಐಕ್ಯನೆಂಬ ಷಟ್ಸ್ಥಲದೊಳಡಗಿ ಆ ಷಟ್ ಸ್ಥಲವೆ ಅಂಗವಾದ ಶರಣನ ಮನಸ್ಥಲದಲ್ಲಿ ಮನೋಮೂರ್ತಿಯಾದ ಲಿಂಗಸ್ಥಲದ ವಿಚಾರವೆಂತಿದ್ದಿತ್ತೆಂದಡೆ ಮುಂದೆ ದೀಕ್ಷಾಗುರುಸ್ಥಲವಾದುದು.