Index   ವಚನ - 643    Search  
 
ನಮಃ ಪದವೆ ಅಂಗ, ಶಿವಃ ಪದವೆ ಲಿಂಗ; ಅಯ ಪದವೆ ಅಸಿಪದ ಸ್ವರೂಪವಾದ ಶಿವ ಜೀವರ ಐಕ್ಯವು. ತತ್ಪದ ವಾಚ್ಯವಾದ ಬ್ರಹ್ಮದಲ್ಲಿ ತ್ವಂ ಪದ ವಾಚ್ಯಾವಾದ ಜೀವಾತ್ಮನು ಭಕ್ತಿ ಎಂಬ ಅಸಿ ಪದದಿಂದ ಕೂಡಿ ಐಕ್ಯನಾದನು. ಈ ಪ್ರಕಾರದಿಂದ ಅಂಗಸ್ಥಲವು ಸಂಪೂರ್ಣವಾಯಿತ್ತು. ಈ ಪೇಳ್ದ ಐಕ್ಯವನು ಸರ್ವಾಚಾರ ಸಂಪನ್ನನೆಂದು ಹೇಳುವರು. ಆತನ ಆಚಾರ ಪ್ರಕಾರವು ಎಂಥಾದೆಂದರೆ, ಅಂಗಸ್ಥಲವನು ಹೇಳುವ ಮುಖದಿಂದವೆ ಹೇಳುವನು. ಆ ಲಿಂಗಸ್ಥಲವಾದರು ಜೀವನ್ಮುಕ್ತ ಚರಿತ್ರ ಪ್ರತಿಪಾದನೆಯಲ್ಲಿ ತತ್ಪದಂಗಳಾಗಿದ್ದಂಥವಯ್ಯ ಶಾಂತವೀರೇಶ್ವರಾ