ಈಶಾನ್ಯದಲ್ಲಿ ಲೋಹ ಕಳಶ ಪುಷ್ಪದ ಪೂಜೆ
ಸಂಪಗೆಯರಳು ಸುರಗಿಯ ಪುಷ್ಪದ ಪೂಜೆ
ಅದರ ಶಾಖೆ ನಾಲ್ಕು ಪಾತಳ ಗಂಗೆ
ನಕ್ಷತ್ರ ಪರ್ವತ ಕಲ್ಪವೃಕ್ಷ ಸಂಸ್ಕೃತಿ ಧೇನು
ವಾಯು ಭೂತ ಅಪಾನವಾಯು ಆದಿಶಕ್ತಿ
ತತ್ಪುರುಷ ವದನ ಋಗ್ವೇದ ಶಾಖೆ
“ಓಂ ಭೂ ಭುವಾ ಓಂ ಸ್ವಾಹಾ
ಓಂ ಮಹಾ ಓಂ ಜನಾ ಓಂ ತಪ
ಓಂ ಸತ್ಯ ಓಂ ತಪಸ್ತೇಸ್ತತ್ಸವುತುರ್ವರೇಣ್ಯ
ಭರ್ಗೋ ದೇವಸ್ಯ ಧೀ ಮಹೀ ಧಿಯೋ ಎನಃ
ಪ್ರಚೋದಯಾತ್” ಎಂಬ ಮಂತ್ರ.
ದೇಹ ಗೌರವ ವರ್ಣ, ಅತ್ರಿ ಗೋತ್ರ,
ಗಾಯಿತ್ರಿ ಛಂದ, ಏಕಾರ ಬೀಜಾಕ್ಷರ,
ಪ್ರಣವ ಪಂಚಾಕ್ಷರಿ ಅಧಿದೇವ ಬ್ರಹ್ಮ
ಅಲ್ಲಿಯ ಆಚಾರ್ಯರು ರೇವಣಸಿದ್ಧಯ್ಯದೇವರು.
ಆತನಂಗ ರಕ್ತವರ್ಣ, ಸಿಂಹವಾಹನ
ಯತ್ಯಾಶ್ರಮ ಅಷ್ಟಶಿಖಿ ಊರ್ಧ್ವಕಂಠ ಕೈಲಾಸ,
ಟೊಪ್ಪರ ಶಿವಯೋಗ ಮಾರ್ಗ
ಕಬ್ಬಿಣದ ಯೋಗದಂಡ ಅಷ್ಟಮಹದೈಶ್ವರ್ಯವೆ ಖರ್ಪರ ಸಿದ್ಧ
ದಯಾ ಧರ್ಮವೆಂಬ ಭಿಕ್ಷ ಶಬ್ದ
ಕಬ್ಬುನವ ಬಲಮುರಿಯ ಮುದ್ರೆ ಭಾಳದಲ್ಲಿ ವಿಭೂತಿ
ಕಂಠದಲ್ಲಿ ರುದ್ರಾಕ್ಷೆ ಮಾಲೆ ದಿವ್ಯ ದೇಹದಲ್ಲಿ ಯಜ್ಞೋಪವೀತ
ಈಶಾನ್ಯದ ಮೂಲೆಯಲ್ಲಿ ಕರಿಯ ಕಂಬಳಿಯ ಕಂಥೆ
ಕರಿಯ ಕಂಬಳಿಯ ಗದ್ದುಗೆ ಕರಿಯ
ಕಂಬಳಿಯ ದಾರ ಸದ್ಭಾವವೆಂಬ ಪೂಜೆ
ಆಚಾರವೆಂಬ ದಾರ ಹಸ್ತದಲ್ಲಿ ಧರಿಸಿದ
ಪ್ರಾಣಲಿಂಗ ಶಾಂತಮಲ್ಲಿಕಾರ್ಜುನ ದೇವರ!
ಹೇಮವರ್ಣ ತತ್ಪುರುಷ ಮುಖ ಪೂರ್ವದಿಕ್ಕು ಸಿಂಹಾಸನ;
ಕರಿಯ ಕಂಬಳಿಯ ಗದ್ಗುಗೆ ಮೇಲೆ
ಪದ್ಮಾಸನದಲ್ಲಿ ಕುಳ್ಳಿರ್ದು ಜಪಂಗೈಯ್ದರು
ರೇವಣಸಿದ್ಧಯ್ಯದೇವರು
ಶಾಂತವೀರೇಶ್ವರಾ