ಆಚಾರ್ಯನು ಜ್ಞಾನವನು ಹೇಳಿ ಶಿಷ್ಯನನು ಶಿಕ್ಷಿಸುವನು.
ಸತ್ಯವನು ನಡಿ, ಧರ್ಮವನು ಆಚರಿಸು,
ನಿನ್ನ ಓದಿನಿಂದ ಗರ್ವಿಷ್ಠನಾಗಬೇಡ,
ಚಿದೈಶ್ವರ್ಯಕ್ಕೊಸ್ಕರ ಮದ ಮತ್ಸರಗೊಳ್ಳಬೇಡ,
ಪೂರ್ವಾಶ್ರಯ ನಿರಸನ ಮಾಹೇಶ್ವರಂಗೆ
ಪಾರ್ವತಿಯೆ ತಾಯಿಯಾಗಿ ಉಳ್ಳವನಾಗು;
ಶಿವನೆ ತಂದೆಯಾಗಿ ಉಳ್ಳವನಾಗು,
ಗುರುವೆ ದೈವ ಉಳ್ಳವನಾಗು,
ಜಂಗಮವೆ ದೈವ ಉಳ್ಳವನಾಗು,
ದೋಷ ರಹಿತವಾದ ಸತ್ಕರ್ಮಂಗಳನು ಸೇವಿಸು;
ದುಷ್ಕರ್ಮಂಗಳನು ಸೇವಿಸದರು,
ಉತ್ತಮ ಶಿವಚರಿತ್ರಂಗಳನ್ನು ಉಪಾಸಿಸು;
ಉಳಿದ ದುಶ್ಚರಿತ್ರಂಗಳು ಮಾಡಲು ತಕ್ಕವಲ್ಲ;
ಇದು ಉಪದೇಶವಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ācāryanu jñānavanu hēḷi śiṣyananu śikṣisuvanu.
Satyavanu naḍi, dharmavanu ācarisu,
ninna ōdininda garviṣṭhanāgabēḍa,
cidaiśvaryakkoskara mada matsaragoḷḷabēḍa,
pūrvāśraya nirasana māhēśvaraṅge
pārvatiye tāyiyāgi uḷḷavanāgu;
śivane tandeyāgi uḷḷavanāgu,
guruve daiva uḷḷavanāgu,
jaṅgamave daiva uḷḷavanāgu,
dōṣa rahitavāda satkarmaṅgaḷanu sēvisu;
duṣkarmaṅgaḷanu sēvisadaru,
uttama śivacaritraṅgaḷannu upāsisu;
uḷida duścaritraṅgaḷu māḍalu takkavalla;
idu upadēśavayya śāntavīrēśvarā