ಶಿವಜ್ಞಾನ ಸ್ವರೂಪವನು ಅನುಸಂಧಾನ ಮಾಡುವ ಜ್ಞಾನವು
ಆವ ಗುರುವಿನಿಂದ ತಿಳಿಯುತ್ತದೋ ಆ ಗುರುವಿನಿಂದ ಮೋಕ್ಷವನೈದಲು
ಇಚ್ಛಿಸುವ ಶಿಷ್ಯಂಗೆ ಮುಕ್ತಿಯ ಸಿದ್ಧಿಗೋಸ್ಕರ ಉಪದೇಶಿಸುವ ಗುರುವೆ
ಜ್ಞಾನಗುರುವೆಂದು ಪ್ರಸಿದ್ಧವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivajñāna svarūpavanu anusandhāna māḍuva jñānavu
āva guruvininda tiḷiyuttadō ā guruvininda mōkṣavanaidalu
icchisuva śiṣyaṅge muktiya sid'dhigōskara upadēśisuva guruve
jñānaguruvendu prasid'dhavayya
śāntavīrēśvarā