Index   ವಚನ - 665    Search  
 
ತಿರಸ್ಕರಿಸಿದ ಜಗದ್ಭೇದವುಳ್ಳ ವಿಕಾರರಹಿತವಾದ ಚಿದಾಕಾಶವನು ಆವಾತನು ನಿಜಾನುಭವ ಮುಕ್ತಿಯಿಂದ ಪ್ರತ್ಯಕ್ಷೀಕರಿಸುವನೊ ಆತನೆ ಜ್ಞಾನಗುರುವೆಂದು ಹೇಳಲಾಗುವುದಯ್ಯ. ಹಸ್ರ ಮಸ್ತಕ ಸಂಯೋಗವಾದ ಬಳಿಕ ಆವುದು ಅಂತರಂಗ ಆವುದು ಬಹಿರಂಗ[ವೆನಲು] ಹಸ್ತ ಮಸ್ತಕ ಸಂಯೋಗವೆ ಅಂತರಂಗ ಮನ ಸಂಯೋಗವೆ ಬಹಿರಂಗ. ಸಾವ ಜೀವಕ್ಕೆ ಗುರು ಬೇಡ ಸಾಯದ ಜೀವಕ್ಕೆ ಗುರುಬೇಡ. ಗುರುವಿಲ್ಲದೆ ಲಿಂಗೈಕ್ಯವಾಗದು. ಅಂಗಲಿಂಗೈಕ್ಯವನರುಹಿಸಿದಾತನೆ ಜ್ಞಾನಗುರುವಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ದೀಕ್ಷಾಗುರು ಶಿಕ್ಷಾಗುರು ಜ್ಞಾನಗುರುವೆಂಬ ತ್ರಿವಿಧ ಸ್ಥಲವು ಏಕವಾದ ಲಿಂಗವು ಭಕ್ತನಂಗದ ಮೇಲೆ ಇಷ್ಟಲಿಂಗ ಸ್ವರೂಪವನೆಯ್ದುದರೆ ಭೇದವೆಂತಿದ್ದಿತೆಂದರೆ ಮುಂದೆ ‘ಕ್ರಿಯಾ ಲಿಂಗಸ್ಥಲ’ವಾದುದು.