Index   ವಚನ - 667    Search  
 
ಶಿವನಲ್ಲಿ ಐಕ್ಯವಂ ಹೇಳುವರು. ಶಿವನು ನಿತ್ಯವಾಗಿ ಅನಾದಿ ಸಿದ್ಧನಾಗಿ ಇಚ್ಛ ವಿಷಯವಾದ ಶಕ್ತಿಯ ಲಿಂಗವನು ಹೆಚ್ಚಾದ ತಪಸ್ಸಿನಿಂದ ಪಡೆವುದು. ಅಧಿಕವಾದ ಇಷ್ಟಲಿಂಗವು ಸಾವಯವವಾಗಿ ಜ್ಞಾನೇಂದ್ರಿಯಂಗಳ ಅವಯವಂಗಳಿಂದ ಗ್ರಹಿಸತಕ್ಕುದಾಗಿ ಇಷ್ಟಾರ್ಥ ಪ್ರಾಪ್ತಿಯನು ಮಾಡುವುದಾಗಿ ಪ್ರತ್ಯಕ್ಷವಾದ ಜನ್ಮ ಜರಾ ಮರಣ ಶೋಕ ಮೋಹವೆಂಬ ಅನಿಷ್ಟ ಪಂಚಕಂಗಳನು ಪರಿಹರಿಸುವುದಾಗಿ ತನ್ನ ಭಕ್ತರುಳಿಗೆ ಇಷ್ಟವಾದ ಉತ್ಸಾಹವನು ಯಾವಾಗಲು ಕೊಡುತ್ತಂ ಇಹುದು. ಅದು ಕಾರಣವಾಗಿ ‘ಇಷ್ಟಲಿಂಗ’ವೆಂದು ‘ಅಥರ್ವಣ’ ಸಂಬಂಧವಾದ ಶ್ರುತಿ ಹೇಳುತ್ತಿರುವುದಯ್ಯ ಶಾಂತವೀರೇಶ್ವರಾ