Index   ವಚನ - 668    Search  
 
ಪರಮಾನಂದ ರೂಪವಾಗಿ ಅರಿವೆ ಸ್ವರೂಪವಾಗಿ ಉಂಟೆಂಬ ಸ್ವರೂಪವನೈಯ್ದಿದ ಬರಿಯ ಪರಬ್ರಹ್ಮವೆ ಸಮಸ್ತ ಸತ್ಕ್ರಿಯಾ ಸಿದ್ಧಿಗೋಸುಗ ಇಷ್ಟಲಿಂಗವೆಂದು ಕರುಹ ತಳೆದಿರ್ಪುದು. ಪರಂಜ್ಯೋತಿ ಸ್ವರೂಪವಾದ ಕ್ರಿಯಾರ್ಥವಾದ ಇಷ್ಟಲಿಂಗವು ಅದು ಕಾರಣವಾಗಿ ಆ ಇಷ್ಟಲಿಂಗದ ಪೂಜೆಯಿಂದಲೆ ಸಮಸ್ತ ಸತ್ಕರ್ಮ ಫಲಂಗಳು ಉದಯವಾಗುತ್ತಿರ್ದಪವಯ್ಯ ಶಾಂತವೀರೇಶ್ವರಾ