Index   ವಚನ - 669    Search  
 
ಸಾಕಾರವಿಡಿದು ಅರ್ಚನೆ ಪೂಜನೆಯ ಮಾಡುವುದು ನಿರಾಕಾರವ ನಂಬಲಾಗದು. ಶ್ರೀಗುರು ಪ್ರಾಣಲಿಂಗವನು ಕರಸ್ಥಲಕ್ಕೆ ಕೊಟ್ಟ ಬಳಿಕ ಮತ್ತೆ ಬೇರೆ ಪ್ರಾಣಲಿಂಗ ಉಂಟೆಂದು ಅರಸಲಾಗದು. ಒಳಗಿರ್ಪುದೆ ಲಿಂಗವು? ಮಲಮೂತ್ರ ಮಾಂಸಗಳ ತನ್ನಿಷ್ಟಲಿಂಗದಲ್ಲಿ ಸಂಯೋಗಿಸಬಲ್ಲಾತನೆ ಪ್ರಾಣಲಿಂಗಿಯಯ್ಯ ಶಾಂತವೀರೇಶ್ವರಾ