Index   ವಚನ - 670    Search  
 
ಆ ಇಷ್ಟಲಿಂಗದ ಅಧಃಪೀಠ ಕಟಿಯೇ ಇಷ್ಟಲಿಂಗವು, ವೃತ್ತ ಗೋಮುಖವೆ ಪ್ರಾಣಲಿಂಗವು, ನಾಳ ಗೋಲಕವೆ ಭಾವಲಿಂಗವೆಂದರಿದು ಅಷ್ಟವಿಧಾರ್ಚನೆ ಷೋಡಶೋಪಚಾರ ಮಂತ್ರ ಧ್ಯಾನ ಜಪ ಸ್ತೋತ್ರ ಮನೋಲಯ ನಿರಂಜನ ಪೂಜೆಗಳನೆಸಗಿ ಆ ಲಿಂಗದಲ್ಲಿಯೆ ಏಕವಾಗುವುದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಅಂಗದಲ್ಲಿ ಅಳವಟ್ಟ ಸತ್ಕ್ರಿಯಾ ಲಿಂಗದಲ್ಲಿ ಭಾವವು ಪೂರ್ಣವಾಗುತ್ತಿರಲಾಗಿ ಮುಂದೆ, ‘ಭಾವಲಿಂಗ’ವಾದುದು