Index   ವಚನ - 671    Search  
 
ಅಂತಃಕರಣದಿಂದ ಗ್ರಹಿಸುವ ವರ್ಣನಾಮಂಗಳಿತೀತವಾದ ಸದಸದ್ ವ್ಯವಹಾರಂಗಳನು ಮಾಡುತ್ತಿರ್ದಂಥ ಮಾಂಗಲ್ಯ ಸ್ವರೂಪವಾದ ಬ್ರಹ್ಮಾದಿಗಳಿಗೆ ಲಯ ಗಮನಂಗಳಂ ಮಾಡುತ್ತಿರ್ದಂಥ ಜ್ಯೋತಿರ್ಮಯವವಾದ ಲಿಂಗವನು ಆ ಕೆಲಂಬರು ಯೋಗೀಶ್ವರರು ತಿಳಿವುತ್ತಿದ್ದಾರು! ಅವರು ಅಜ್ಞಾನವನು ತ್ಯಜಿಸುತ್ತಿರ್ದಪರಯ್ಯ ಶಾಂತವೀರೇಶ್ವರಾ