Index   ವಚನ - 677    Search  
 
‘ಅಸಿ’ ಪದವೆ ಭಾವಲಿಂಗ. ‘ತತ್ಪದ’ವೆ ಪ್ರಾಣಲಿಂಗ ;ತ್ವಂ’ ಪದವೆ ಇಷ್ಟಲಿಂಗ, ಭಾವಲಿಂಗವೆ ಆದಿಯು, ಪ್ರಾಣಲಿಂಗವೆ ದ್ವಿತೀಯವು. ಇಷ್ಟಲಿಂಗವೆ ತೃತೀಯವಯ್ಯ. ಸ್ಥೂಲರೂಪವಾದ ಇಷ್ಟಲಿಂಗಕ್ಕೆ ಕ್ರಿಯಾ ರೂಪವಾದ ಪೂಜೆಯು, ಸೂಕ್ಷ್ಮವಾದ ಪ್ರಾಣಲಿಂಗಕ್ಕೆ ಮಂತ್ರ ಧ್ಯಾನ ಜಪ ಸ್ತೋತ್ರಾದಿ ಜ್ಞಾನಾರ್ಚನೆಯು ಸ್ಥೂಲ ಸೂಕ್ಷ್ಮವನು ಮೀರಿರ್ದ ತೃಪ್ತಿ ಲಿಂಗ ರೂಪವಾದ ಪರಮಾತ್ಮನಲ್ಲಿ ಮನೋಲಯ ನಿರಂಜನದ ಜ್ಞಾನ ಪೂಜೆ ಪರಬ್ರಹ್ಮ ಸ್ಥೂಲ ಸೂಕ್ಷ್ಮ ರೂಪುಗಳು ಕಲ್ಪಿತಂಗಳು; ಆ ರೂಪುಗಳಿಂದೇನು ಪ್ರಯೋಜನವಿಲ್ಲ. ಅದು ಕಾರಣವಾಗಿ, ಪರಮ ಜ್ಞಾನಸ್ವರೂಪವಾದ ತೃಪ್ತಿಲಿಂಗವನೆ ಪೂಜಿಸುವುದು. ಬಳಿಕಾ ಪರಮಜ್ಞಾನವನರಿದಾತನೆ ಜ್ಞಾನಲಿಂಗಿ ಎಂದು ಹೇಳುತ್ತಿರ್ದಪರಯ್ಯ ಶಾಂತವೀರೇಶ್ವರಾ