Index   ವಚನ - 686    Search  
 
ಸ್ವಯಂಸ್ಥಲಾನಂತರದಲ್ಲಿ ಸ್ವಯಜಂಗಮವೆ ಜಡೆ ಮುಡಿ ಲೋಚು ಬೋಳು ಮೊದಲಾದ ಶಿವಲಾಂಛನವನು ಧರಿಸಿ ಚಿರಾಂಬರಾಖ್ಯ ನಾರ ವಸ್ತ್ರವನು ಹೊದೆದು ಲೋಕವನುದ್ಧರಿಸುತ್ತಲೆ ಮೋಕ್ಷವನರಿವುತ್ತಿದ್ದಾತನಾಗಿ ಏಕಾಂಬರ ಉಳ್ಳಾತನಾಗಿ ವಪನಕ್ರಿಯೆಯುಳ್ಳವನಾಗದ ಭಿಕ್ಷೆಗೊಸುಗ ಗ್ರಾಮವನು ಹೊಗುವುನು. ಸಾಯಂಕಾಲ ಪರ್ಯಂತವು ಪ್ರದಕ್ಷಣದಿಂದ ಜಿಗುಪ್ಸಾ ರಹಿತನಾಗುವ ಭಿಕ್ಷೆಯಂ ಬೇಡುತ್ತಿರ್ಪನಯ್ಯ ಶಾಂತವೀರೇಶ್ವರಾ