Index   ವಚನ - 689    Search  
 
ಈ ಪ್ರಕಾರ ಆಚರಿಸುತ್ತಿರುವ ಆ ಶಿವಯೋಗಿಗೆ ಪರಿಗ್ರಹಾವಲಂಬನಗಳು ಅಹವು. ಆವಾವೆಂದಡೆ, ಶ್ರೀ ವೀರಶೈವಾಗಮವಿದ್ಯೆಯೆ ಹೆಂಡತಿಯ, ಸಂತೋಷವೆ ಪುತ್ರನು, ಸೈರಣಿಯೆ ಪರಿಚಾರಗಿತ್ತಿಯು, ಶವಿಭಕ್ತಿಯೆ ತಾಯಿ, ಶಿವಚಾರವೆ ತಂದೆಯು, ಸತ್ಯವೆ ಮೊಮ್ಮಗನು, ಶಾಂತಿಯೆ ಸಂಗಡಿಗನು, ವಿರಾಗತ್ವವೆ ಮಿತ್ರನು; ದೇಹ ದಂಡನೆಯೆ ಆಚಾರ್ಯನು, ಶ್ರದ್ಧಯೆ ತಂಗಿಯು, ಅಹಿಂಸೆಯೆ ಗೌಡಿಯು, ಕಳವಿಲ್ಲದುದೆ ಭೃತ್ಯನು, ಮೈ ಗೋಚರಿಸುವಂಥ ತತ್ವ ವಿಚಾರವೆ ಕ್ಷೇತ್ರವು, ಮೋಕ್ಷವು ತನ್ನ ದೇಶವೆನಿಸುವುದು. ಈ ಪ್ರಕಾರದಲ್ಲಿ ಪ್ರಾಣಲಿಂಗ ಸಂಬಂಧಿಯಾದಾತಂಗೆ ಇದು ಲೇಸಾಗಿ ತಿಳಿಯತಕ್ಕದ್ದು ಶಾಂತವೀರೇಶ್ವರಾ