Index   ವಚನ - 78    Search  
 
ಮದಮಾದಿಗವು ತಂದೆಯ ಇಂದ್ರಿಯ; ಅಧಮವ ತನ್ನ ತಾಯ ಹೊಲೆ. ಎದರೊಳು ಪುಟ್ಟಿದೆ ಗದಕಂಪಿತ ಪಾಕುಳದೊಳು ಪುಳು. ಅದು ಕುಲವೆಂತು, ಶ್ರೇಷ್ಠ ಶುದ್ದವೆಂತು ಅದುದು? ಪದುಳವು ಸುಮ್ಮನೆ ಇಪ್ಪದು. ಇದಿರು ವಾಕ್ಯದಿಂದ ನರಕ. ಕದನವು ಸಲ್ಲದು ಆದರವೈದುವ ಪದರವಿಲ್ಲದಿರೆ ಕದನ ಕೋಳಹಳ ಪರಮಪ್ರಭುವೆ.