Index   ವಚನ - 80    Search  
 
ಪುರಾಣವಾಕ್ಯವ ನುಡಿಯಲು ಮರೀಚಿಕಾ ಜಲದ ತೆರನ ನುಡಿವರು. ಕುರೂಪು ರೂಪು ಎಂತಕ್ಕು? ಮರಗಾಲ ಕಟ್ಟಿ ಮರನನೇರಿದ ತೆರನ, ನೆರೆಮನೆ ಸಿರಿ ಉಳ್ಳಂದದಿ, ಎರವಿನ ವಚನಗಳಿಂದ ಗುರುದ್ರೋಹಿ ಅಪರು. ದೊರೆತನ ನಡೆ ನುಡಿ ಉಳ್ಳರೆ, ಪುರಾಣವೆ ಸಿದ್ಧಿಯಾಹುದು ಪರಮಪ್ರಭುವೆ.