‘ವೇದಾಂತ ಜನ್ಯಂ ಯಜ್ಞಾನಂ ವಿದ್ಯೇತಿ ಪರಿಕೀರ್ತ್ಯತೇ | ವಿದ್ಯಾಯಾಂ
ರಮತೇ ತಸ್ಯಾಂ ವೀರ ಇತ್ಯಭಿಧೀಯತೇ’ ಇಂತೆಂದು ಉಪನಿಷತ್ತಿನಲ್ಲಿ
ಹುಟ್ಟಿದಂಥ ಯಾವುದಾನೊಂದು ಜ್ಞಾನ ಉಂಟು,
ಅದೇ ವಿದ್ಯೆಯೆಂದು ಚೆನ್ನಾಗಿ ಹೇಳಲ್ಪಡುತ್ತಿರ್ದಪುದು.
ಆ ವಿದ್ಯೆಯಲ್ಲಿ ಯಾವಾತ ವಿನೋದಿಸುತ್ತಿರ್ದಪನು
ಆತನೆ ವೀರನೆಂದು ಚೆನ್ನಾಗಿ ಹೇಳಲ್ಪಡುತ್ತಿರ್ದಪನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Vēdānta jan'yaṁ yajñānaṁ vidyēti parikīrtyatē | vidyāyāṁ
ramatē tasyāṁ vīra ityabhidhīyatē’ intendu upaniṣattinalli
huṭṭidantha yāvudānondu jñāna uṇṭu,
adē vidyeyendu cennāgi hēḷalpaḍuttirdapudu.
Ā vidyeyalli yāvāta vinōdisuttirdapanu
ātane vīranendu cennāgi hēḷalpaḍuttirdapanayya
śāntavīrēśvarā