Index   ವಚನ - 78    Search  
 
ಮತ್ತಮಾ ಶಿವಪೂಜಾವಿಧಿಗೆ ದೇಶ ಕಾಲ ಸ್ಥಾನ ದ್ರವ್ಯ ಪ್ರಯೋಜನಾದಿಗಳಂ ತಾಂತ್ರಿಕ ವೈದಿಕಮೆಂಬೆರೆಡೂ ಪೂಜಾಭೇದಂಗಳಂ, ಅಂತಃಶೌಚ ಬಾಹ್ಯಶೌಚಯೆಂಬೆರಡು ಶೌಚಭೇದಂಗಳಂ, ಶೋಷಣ ದಹನ ಪ್ಲಾವನಮೆಂಬ ಕ್ರಿಯೆಗಳಂ, ಆತ್ಮಶುದ್ಧಿ ದ್ರವ್ಯಶುದ್ಧಿ [ಲಿಂಗಶುದ್ಧಿ] ಮಂತ್ರಶುದ್ಧಿಯೆಂಬ ಪಂಚಶುದ್ಧಿಗಳ ವಿಸ್ತರಿಸುದವರಲ್ಲಿ ಶೌಚಾಚಮನ ಸ್ನಾನ ಭಸ್ಮರುದ್ರಾಕ್ಷಧಾರಣ ಕವಚ ಮಂತ್ರ ಕಲಾನ್ಯಸ ಧ್ಯಾನಾದಿ ರಚನೆಗೆಯ್ದುದೇ ಆತ್ಮಶುದ್ಧಿ ಎನಿಸೂದು. ಸಮ್ಮಾರ್ಜನಾನುಲೇಪನ ವರ್ಣಕ ಗಂಧಪುಷ್ಪಧೂಪ ದೀಪಾದಿ ನಿರ್ಮಲೋಪಕರಣಂಗಳಿಂ ಚೌಕಮನಲಂಕರಿಪುದೆ ಸ್ಥಾನಶುದ್ಧಿ ಎನಿಸೂದು. ಜಲಗಂಧಾಕ್ಷತಾ ಪುಷ್ಪದಿಗಳಂ ನಿರೀಕ್ಷಿಸಿ, ಭಸ್ಮಮಂತ್ರವಾರಿಗಳಿಂ ಸಂಪ್ರೋಕ್ಷಣಂಗೆಯ್ವುದೆ ದ್ರವ್ಯಶುದ್ಧಿ ಎನಿಸೂದು. ಅನಾಮಿಕ ಮಧ್ಯಮೆಗಳು ಮಧ್ಯದಲ್ಲಿ ನವೀನಕುಸುಮವಿಡಿದು ಅಂಗುಷ್ಠತರ್ಜನಿಗಳಿಂ ಮೊದಲ ನಿರ್ಮಾಲ್ಯಮಂ ತ್ಯಜಿಸಿ, ಲಿಂಗಪೀಠಮಂ ವಾರಿಯಿಂ ಪ್ರಕ್ಷಾಲನಂಗೆಯ್ವುದೆ ಲಿಂಗಶುದ್ಧಿ ಎನಿಸೂದು. ಸಕಲಪೂಜಾರ್ಥಮಾಗಿ ಓಂ ನಮಃ ಶಿವಾಯ ಸ್ವಾಹಾ ಎಂದುಚ್ಚರಿಪುದೆ ಮಂತ್ರಶುದ್ಧಿಯಹುದೆಂದೊಡಂಬಟ್ಟು, ಬಳಿಕ ಅಸ್ತ್ರಮುದ್ರೆ ಚಕ್ರಮುದ್ರೆ ಮಹಾಮುದ್ರೆ ಶೋಧನಿಮುದ್ರೆ ಸಂಹಾರ ಪಂಚಮುಖಮುದ್ರೆ ಸುರಭಿಮುದ್ರೆ ದ್ರವ್ಯಮುದ್ರೆ ಮುಕುಳಿಕಾಮುದ್ರೆ ಪದ್ಮಮುದ್ರೆ ಶಶಕರ್ಣಮುದ್ರೆ ಶಕ್ತಿಮುದ್ರೆ ಬೀಜಮುದ್ರೆ ಶಾಂತಿಮುದ್ರೆ ಆವಾಹನಮುದ್ರೆ ಮನೋರಮಮುದ್ರೆ ಧ್ವಜಮುದ್ರೆ ಲಿಂಗಮುದ್ರೆ ಗಾಯತ್ರಿಮುದ್ರೆ ಕಾಲಕಂಠಮುದ್ರೆ ಶೂಲಮುದ್ರೆ ನಮಸ್ಕಾರಮುದ್ರೆ ಯೋನಿಮುದ್ರೆ [ವಿ] ಬ್ದೊಟ……… ಮುದ್ರೆ ……….ರ ಮುದ್ರೆ ಎಂಬ ಸಕಲ ಮುದ್ರಾಲಕ್ಷಣವನರಿದಾಯಾ ಯೋಗ್ಯ ಕ್ರಿಯೆಗಳಲ್ಲಿ ಪ್ರಯೋಗಿಸಿ, ಬಳಿಕ ಕೂರ್ಮ ಅನಂತಸಿಂಹ ಪದ್ಮವಿ ……… ಪೀಠಂಗಳಲ್ಲಿ ……..ಮಾದ ಸಿಂಹಾಸನಕ್ಕೆ ಶ್ವೇತರಕ್ತಪೀತಶ್ಯಾಮವರ್ಣದ ಸಿಂಹಾಕಾರಮಾದ ಧರ್ಮಜ್ಞಾನ ವೈರಾಗ್ಯ ಐಶ್ವರ್ಯವೆಂಬ ನಾಲ್ಕೆ ಕ್ರಮದಿಂದಾಗ್ನ್ಯಾದಿ ದಿಕ್ಕಿನ ಪಾದಚತುಷ್ಟಯಂಗಳು, ರಾಜಾವರ್ತಪ್ರಭೆಯ ರೂಪಮಾದ ಅಧರ್ಮ ಅಜ್ಞಾನ ಅವೈರಾಗ್ಯ ಅನೈಶ್ವರ್ಯವೆಂಬ ನಾಲ್ಕೆ ಕ್ರಮಾದಿ ಪೂರ್ವಾದಿ ದಿಕ್ಕಿನ ಪಾದಚತುಷ್ಟಯಂಗಳ ಮೇಲೆ ಅಣಿಮಾದಿಗಳೆ ಪೂರ್ವಾದ್ಯಷ್ಟ ದಿಕ್ಕಿನ ದಳಂಗಳು, ವಾಮಾದಿ ಸರ್ವಭೂತ ದಮನಾಂತಮಾದ ರುದ್ರವೆ ಪೂರ್ವಾದ್ಯಷ್ಟ ದಿಕ್ಕಿನ ಕೇಸರಂಗಳು, ವೈರಾಗ್ಯವೆ ಕರ್ಣಿಕೆ ವಾಮೆ ಮೊದಲು ಮನೋನ್ಮನಿ ಕಡೆಯಾದ ನವಶಕ್ತಿಗಳೆ ಪೂರ್ವಾದಿ ಮಧ್ಯಾಂತವಾದ ಕರ್ಣಿಕಾ ಬೀಜಂಗಳು, ಬಳಿಕದರ ಮೇಲೆ ಅಗ್ನಿ ರವಿ ಶಶಿ ಮಂಡಲತ್ರಯಂಗಳು, ಬಳಿಕದರ ಮೇಲೆ ತಮೋರಜಸತ್ವಗುಣಂಗಳವರ ಮೇಲೆ ಜೀವಾತ್ಮ ಅಂತರಾತ್ಮ ಪರಮಾತ್ಮರುಗಳವರ ಮೇಲೆ ಅತ್ಮತತ್ವ ವಿದ್ಯಾತತ್ವ ಶಿವತತ್ವಂಗಳಿಂತು ಪರಿವಿಡಿದಾಯತಮಾದ ಸಿಂಹಾಸನಮಂ ಪರಿಕಲ್ಪಿಸಿ ಲಿಂಗಾರ್ಚನೆಯಂ ಮಾಳ್ಪುದಯ್ಯ ಶಾಂತವೀರೇಶ್ವರಾ.