ಬಳಿಕ ಪರಮ ಪವಿತ್ರ ದ್ರವ್ಯಂಗಳಿಂ ಮಾಳ್ಪ ಉಪಚಾರಂಗಳೊಳಗೆ
ತ್ರಿವಿಧೋಪಚಾರ ಪಂಚೋಪಚಾರ ಅಷ್ಟೋಪಚಾರ
ದಶೋಪಚಾರ ಷೋಡಶೋಪಚಾರ ಚತುರ್ವಿಂತ್ಯುಪಚಾರ
ದ್ವಾತ್ರಿಂಶದುಪಚಾರಂಗಳುಂಟವರಲ್ಲಿ
[ಧ್ಯಾನ] ಆವಾಹನ ಆಸನ ಪಾದ್ಯ ಅರ್ಘ್ಯ ಆಸಮನೀಯ
ಸ್ನಾನ ವಸ್ತ್ರ ಯಜ್ಞ ಸೂತ್ರ ಭೂಷಣ ಗಂಧ ಅಕ್ಷತೆ ಪುಷ್ಪ
ಧೂಪ ದೀಪ ನೈವೇದ್ಯ ಮುಖವಸನ ನೀರಾಜನ ದರ್ಪಣ
ಫಲಾರ್ಪಣ ತಾಂಬೂಲ ಪ್ರದಕ್ಷಿಣ ನಮಸ್ಕಾರ
ಸ್ತೋತ್ರ ಪುರಾಣಪಠಣ ಛತ್ರ ಚಾಮರ ವ್ಯಜನ ಶಯ್ಯೆ
ಸಂಗೀತ ನೃತ್ಯ ವಾದ್ಯ ಅತ್ಮರೋಪಣಯೆಂಬ
ದ್ವಾತ್ರಿಂಶದುಪಚಾರಂಗಳು [ಸಮಂತ್ರಕ]ಮಾಗಿ ಮಾಡಿ,
ಬಳಿಕೀ ಸಮಸ್ತ ಪೂಜಾ ದ್ರವ್ಯಗಳಿಲ್ಲದಿರೆ
ಜಲಮಾತ್ರ ಪುಷ್ಪಮಾತ್ರದಿಂದರ್ಚಿಸಲಾ
ಸಕಲ ಸಾಂಗಿಕಮಾದರ್ಚನೆಗೆ ಸಮಾನವಹುದಾಗಿ
ಪೂಜಕಂಗೆ ಶ್ರದ್ಧಾಭಕ್ತಿಯೆ ಮುಖ್ಯಮಾಗಿಹುದಾ
ಭಕ್ತಿಯೆ ಈಶ್ವರ ವಿಷಯಮಾದ ಶ್ರವಣ ಕೀರ್ತನ
ಸ್ಮರಣ ಪಾದಸೇವೆ ಪೂಜೆ ವಂದನೆ ದಾಸ್ಯ ಸಖ್ಯ
ಆತ್ಮರ್ಪಣಮೆಂಬ ನವವಿಧಮಾಗಿರ್ಪುದೆಂದರಿದಿಂತು
ಪೀಠಸ್ಥ ಶಿವಲಿಂಗದ ಬಹಿರಂಗಪೂಜೆಯಂ ವಿಸ್ತರಿಸಿ,
ಬಳಿಕಿಹ ಲೋಕಫಲವನಿಚ್ಚೈಸುಮಾತನಾದೊಡಂ,
ಪರಲೋಕಫಲವವಂ ಕಾಮಿಸುವಾತನೊದೊಡಂ,
ಸಕಲ ಜನಕ್ಕೆ ಹಿತಮಂ
ಬಯಸುವಾತನಾದೊಡಂ, ಬಾಹ್ಯದ್ರವಂಗಳಿಂದಿಂತು
ಶಿವಪೂಜೆಯಂ ಮಾಡವೇಳ್ಕುಮೆಂದು ನಿಶ್ಚೈಸಿರುವದಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷika parama pavitra dravyaṅgaḷiṁ māḷpa upacāraṅgaḷoḷage
trividhōpacāra pan̄cōpacāra aṣṭōpacāra
daśōpacāra ṣōḍaśōpacāra caturvintyupacāra
dvātrinśadupacāraṅgaḷuṇṭavaralli
[dhyāna] āvāhana āsana pādya arghya āsamanīya
snāna vastra yajña sūtra bhūṣaṇa gandha akṣate puṣpa
dhūpa dīpa naivēdya mukhavasana nīrājana darpaṇa
phalārpaṇa tāmbūla pradakṣiṇa namaskāra
stōtra purāṇapaṭhaṇa chatra cāmara vyajana śayye
saṅgīta nr̥tya vādya atmarōpaṇayemba
Dvātrinśadupacāraṅgaḷu [samantraka]māgi māḍi,
baḷikī samasta pūjā dravyagaḷilladire
jalamātra puṣpamātradindarcisalā
sakala sāṅgikamādarcanege samānavahudāgi
pūjakaṅge śrad'dhābhaktiye mukhyamāgihudā
bhaktiye īśvara viṣayamāda śravaṇa kīrtana
smaraṇa pādasēve pūje vandane dāsya sakhya
ātmarpaṇamemba navavidhamāgirpudendaridintu
Pīṭhastha śivaliṅgada bahiraṅgapūjeyaṁ vistarisi,
baḷikiha lōkaphalavaniccaisumātanādoḍaṁ,
paralōkaphalavavaṁ kāmisuvātanodoḍaṁ,
sakala janakke hitamaṁ
bayasuvātanādoḍaṁ, bāhyadravaṅgaḷindintu
śivapūjeyaṁ māḍavēḷkumendu niścaisiruvadayya
śāntavīrēśvarā.