ನಿವಾರಕ ಕರ್ಮದೋಪಾದಿಯಲ್ಲಿ
ಸೂಕ್ಷ್ಮವಾಗಿ ಶೀತವರ್ಣವಾಗಿ ಪ್ರಕಾಶಿಸುತ್ತಿರ್ದ,
ಅಣುವಿನೋಪಾದಿಯ ಶಿಖಿಯುಂಟು.
ಅಂಥಾ ಶಿಖಿಯ ಮಧ್ಯದಲ್ಲಿ ಪರಮಾತ್ಮಲಿಂಗವು
ವಿಶೇಷವಾಗಿರುತ್ತಿರ್ದಿತು.
ಧಾರಣವೆ ಬಿಲ್ಲು, ಮನಸ್ಸೇ ಭಾಣವು;
ಪರಬ್ರಹ್ಮವೇ ಆ ಬಾಣಕ್ಕೆ ಗುರಿಯೆಂದು
ಹೇಳಲ್ಪಡುತ್ತಿದ್ದಿತು. ಮರೆವೆಯಿಲ್ಲದುದರಿಂದ ಭೇದಿಸಲ್ತಕ್ಕುದು.
ಆ ಬಾಣದೋಪಾದಿಯಲ್ಲಿ
ಪರಬ್ರಹ್ಮಸ್ವರೂಪವಾದವೆನೇ ಶಿವಯೋಗೀಶ್ವರನಯ್ಯ,
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Nivāraka karmadōpādiyalli
sūkṣmavāgi śītavarṇavāgi prakāśisuttirda,
aṇuvinōpādiya śikhiyuṇṭu.
Anthā śikhiya madhyadalli paramātmaliṅgavu
viśēṣavāgiruttirditu.
Dhāraṇave billu, manas'sē bhāṇavu;
parabrahmavē ā bāṇakke guriyendu
hēḷalpaḍuttidditu. Mareveyilladudarinda bhēdisaltakkudu.
Ā bāṇadōpādiyalli
parabrahmasvarūpavādavenē śivayōgīśvaranayya,
śāntavīrēśvarā.