Index   ವಚನ - 55    Search  
 
ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ. ಬ್ರಹ್ಮ ವಿಷ್ಣು ಭವಕ್ಕೆ ಗುರಿಯಾದುದ ಕಂಡೆ. ದೇವ ದಾನವ ಮಾನವರು ಮಾಯಾ ಯೋನಿಮುಖವಾದುದ ಕಂಡೆ. ಬಟ್ಟಬಯಲಲ್ಲಿ ನಿಂದು ನಿಮ್ಮ ಮುಟ್ಟಿದೆನಯ್ಯಾ ಅಮುಗೇಶ್ವರಾ.