Index   ವಚನ - 76    Search  
 
ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮವ ನುಡಿಯಲೇಕೆ? ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ? ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ? ಹೊತ್ತುಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ? ಅಮುಗೇಶ್ವರಲಿಂಗವನರಿದ ಶರಣಂಗೆ ಹತ್ತುಸಾವಿರವನೋದಲೇಕೆ? ಹತ್ತುಸಾವಿರವ ಕೇಳಲೇಕೆ? ಭ್ರಷ್ಟರ ಕೂಡೆ ನುಡಿಯಲೇಕೆ?