•  
  •  
  •  
  •  
Index   ವಚನ - 231    Search  
 
ಕರ್ಮಾಧೀನವೆಂಬ ಕರ್ಮಿ. ಲಿಂಗಾಧೀನವೆಂಬ ಭಕ್ತ. ದೇಹ ಪ್ರಾರಬ್ಧವೆಂಬನದ್ವೈತಿ. ಈ ತ್ರಿವಿಧವೆನ್ನದವ[ರ[, ನೀನೆಂಬೆ ಗುಹೇಶ್ವರಾ.
Transliteration Karmādhīnavemba karmi. Liṅgādhīnavemba bhakta. Dēha prārabdhavembanadvaiti. Ī trividhavennadava[ra[, nīnembe guhēśvarā.
Hindi Translation कर्माधीन कहनेवाले कर्मी, लिंगाधीन कहनेवाले भक्त, देह प्रारब्ध कहनेवाले अद्वैति- इन त्रिविध न माननेवालों को तुम क्या कहोगे गुहेश्वरा। Translated by: Eswara Sharma M and Govindarao B N
Tamil Translation கருமவசமென்பான் கருமி, இலிங்கவசமென்பான் பக்தன் உடலே வினைக்காரணமென்பான் அத்துவைதி இவ்விதம் மூவகைகளில் கூறாதவர்களை நீஎனக் கருதுவேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದ್ವೈತಿ = ದೇಹವೆಂಬುದು ಮಾಯಿಕ, ಬರಿ ಭ್ರಮೆ ಎಂದು ಪ್ರತಿಪಾದಿಸುವವನು; ಈ ತ್ರಿವಿಧವೆನ್ನದವರು = ಈ ಮೂರು ರೀತಿಯಲ್ಲಿ ಹೇಳದವರು; ಕರ್ಮಿ = ಕರ್ಮನಿಯತಿಯಲ್ಲಿ ಶ್ರದ್ಧೆಯಿರಿಸಿದವನು; ನೀನೆಂಬೆ = ಸಾಕ್ಷಾತ್ ಗುಹೇಶ್ವರನೇ ಎಂದು ಭಾವಿಸುವೆ; ಭಕ್ತ = ಶಿವಭಕ್ತ, ಶಿವನ ಆರಾಧಕ; ಲಿಂಗ = ಶಿವನ ಚಿಹ್ನೆ; Written by: Sri Siddeswara Swamiji, Vijayapura