•  
  •  
  •  
  •  
Index   ವಚನ - 233    Search  
 
ತಮ್ಮ ತಮ್ಮ ಭಾವಕ್ಕೆ, ಉಡಿಯಲ್ಲಿ ಕಟ್ಟಿಕೊಂಡಬರು. ತಮ್ಮ ತಮ್ಮ ಭಾವಕ್ಕೆ, ಕೊರಳಲ್ಲಿ ಕಟ್ಟಿಕೊಂಡಬರು. ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ, ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ. ಸಾಧಕನಲ್ಲ ಭೇದಕನಲ್ಲ, ಗುಹೇಶ್ವರಲ್ಲಯ್ಯ ತಾನೆ ಬಲ್ಲ.
Transliteration Tam'ma tam'ma bhāvakke, uḍiyalli kaṭṭikoṇḍabaru. Tam'ma tam'ma bhāvakke, koraḷalli kaṭṭikoṇḍabaru. Nānenna bhāvakke pūjisa hōdaḍe, kaitappi manadalli silukittenna liṅga. Sādhakanalla bhēdakanalla, guhēśvarallayya tāne balla.
Hindi Translation अपने अपने भावानुसार गोद में बाँधते हैं । अपने अपने भावानुसार गले में बाँधते हैं। मैं अपने भावानुसार पूजने लगे तो हाथ से फिसलकर मन में लग गया मेरा लिंग । न साधक, न भेदक ; गुहेश्वर ही जानता है ! Translated by: Eswara Sharma M and Govindarao B N
Tamil Translation தாம் விரும்பியவாறு இடுப்பிலே அணிவர் தாம் விரும்பியவாறு கழுத்திலே அணிவர் நான் என் விருப்பத்திற்கு ஏற்ப பூஜிக்கச் சென்றால் கைதவறி, மனத்தில் சிக்கியது என் இலிங்கம் சாதகனன்று, ஆராய்வோனன்று, குஹேசுவரனே அறிவான். Translated by: Smt. Kalyani Venkataraman, Chennai
ಶಬ್ದಾರ್ಥಗಳು ಭೇದಕ = ಲಿಂಗತತ್ವ್ತವನ್ನು ಬುದ್ದಿಯ ಮೂಲಕ ವಿಮರ್ಶಿಸಿ ತಿಳಿಯಲೆಳಸುವವನು; ಸಾಧಕ = ಲಿಂಗವನ್ನು ಭಿನ್ನವಾಗಿ ಇಟ್ಟು ಆರಾಧಿಸುವವನು; Written by: Sri Siddeswara Swamiji, Vijayapura