ಖೇಚರದ ಮುದ್ರೆಯನು ಆಚರಿಸಲರಿದಿಹರೆ |
ಲೋಚನವು ಮೂರು ತನಗಕ್ಕು; ಭೂಚರನು |
ಖೇಚರನಕ್ಕು; ಸರ್ವಜ್ಞ
Art
Manuscript
Music
Courtesy:
Transliteration
Khēcarada mudreyanu ācarisalaridihare |
lōcanavu mūru tanagakku; bhūcaranu |
khēcaranakku; sarvajña
ಶಬ್ದಾರ್ಥಗಳು
ಆಚರಿಸಲು = ಮಾಡಲಿಕ್ಕೆ ತಿಳಿದು; ಖೇಚರದ ಮುದ್ರೆ = ನಾಲಿಗೆಯನ್ನು ಉದ್ದವಾಗಿ ಎಳೆದು ಗಂಟಲದಲ್ಲಿ ಸಿಕ್ಕಿಸಿ ಶ್ವಾಸನಿರೋಧನ ಮಾಡುವ ಯೋಗ ವಿದ್ಯೆ ಇದರಿಂದ ಮನುಷ್ಯನು ಹಕ್ಕಿಯಂತ; ಖೇಚರನಕ್ಕು = ಆಕಾಶದಲ್ಲಿ ಹಾರಾಡುವ ಹಕ್ಕಿಯಂತಾಗುವನು.; ಭೂಚರ = ಭೂಮಿಯ ಮೇಲೆ ಚರಿಸುವ ಮನುಷ್ಯನು; ಲೋಚನವು ಮೂರುತನಗಕ್ಕು = ಶಿವನಾಗುವನು;