•  
  •  
  •  
  •  
Index   ವಚನ - 239    Search  
 
ಹೋಹ ಬಟ್ಟೆಯಲೊಂದು, ಮಾಯ ಇದ್ದುದ ಕಂಡೆ. ಠಾಣಾಂತರ ಹೇಳಿತ್ತು, ಠಾಣಾಂತರ ಹೇಳಿತ್ತು, ಅಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ, ಗುಹೇಶ್ವರನ ಕರಣಂಗಳು ಕುತಾಪಿಗಳು ಅಲ್ಲಲ್ಲಿಗೆ.
Transliteration Hōha baṭṭeyalondu, māya idduda kaṇḍe. Ṭhāṇāntara hēḷittu, ṭhāṇāntara hēḷittu, allallige allallige allallige, guhēśvarana karaṇaṅgaḷu kutāpigaḷu allallige.
Hindi Translation जाते रास्ते पर माया को देखा। स्थानांतर कहा था, स्थानांतर कहा था। कहीं कहीं इधर उधर, कहीं कहीं गुहेश्वर को न जानने का कारण तापदायक है। Translated by: Eswara Sharma M and Govindarao B N
Tamil Translation போகும் வழியில் ஒரு மாயையைக் கண்டேன் மாற்று வழியைக் கூறியது மாற்று வழியைக் கூறியது ஆங்காங்கு, ஆங்காங்கு ஆங்காங்கு புலன்கள் கேடுவிளைவிப்பவை குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಕುತಾಪಿ = ತಾಪದಾಯಕ, ಲೋಕಕಂಟಕ; ಠಾಣಾಂತರ = ಸ್ಥಾನಾಂತರ; ಭಿನ್ನಸ್ಥಾನ; ಮಾಯೆ = ಸತ್ಯವಸ್ತುವನ್ನು ಮರೆಮಾಡುವ, ಆಮಿಷಗಳನ್ನು ತೋರಿ ಮರುಳುಗೊಳಿಸುವ ಅಜ್ಞಾನ, ಮೋಹಶಕ್ತಿ; ಹೋಹ ಬಟ್ಟೆ = ಜೀವಿಗಳೆಲ್ಲ ನಡೆದುಹೋಗುವ ಮಾರ್ಗ; ಸಂಸಾರಪಥ; Written by: Sri Siddeswara Swamiji, Vijayapura