Index   ವಚನ - 79    Search  
 
ಎನಗೆ ಹಾಲೂಟವನಿಕ್ಕುವ ತಾಯೆ, ಎನಗೆ ಪರಿಣಾಮವ ತೋರುವ ತಾಯೆ, ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ, ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ!