ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು.
ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು,
ಲೆಪ್ಪದ ಜಲದ ಪಾದಘಾತದಂತೆ.
ಕರ್ತೃತ್ವವೆಲ್ಲಿಯದೊ ಗುಹೇಶ್ವರಾ.
Transliteration Tappi nōḍidaḍe manadalli accottidantittu.
Ippeḍeya vicārisi nōḍidaḍe illadantāyittu,
leppada jalada pādaghātadante.
Kartr̥tvavelliyado guhēśvarā.
Hindi Translation गलती से देखे मन में छाप लगे जैसा था।
दोनों तरफ विचार करे न जैसा था।
बेडे के जल का पदाघात जैसा
कर्तृत्व कहाँ है गुहेश्वरा ?
Translated by: Eswara Sharma M and Govindarao B N
Tamil Translation மறந்து நோக்கின் மனத்தில் பதிந்ததனைய இருந்தது
மூல நிலையை ஆராய்ந்து நோக்கின் இல்லை எனத் தோன்றும்
தெப்பம் மிதக்கும் நீரின் அடிச்சுவட்டைப் போன்று
கடப்பாடு உணர்வு எத்தன்மைத்தோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಪ್ಪೆಡೆಯ = ಆ ಸಂಸಾರವು ಇರುವ ಮೂಲನೆಲೆಯನ್ನು(ಅಧಿಷ್ಠಾನವನ್ನು); ಇಲ್ಲದಂತಾಯಿತ್ತು = ಆ ಸಂಸಾರವು ಇಲ್ಲದಂತಾಗುತ್ತದೆ; ತಪ್ಪಿ = ಮರವೆಗೆ ಒಳಗಾಗಿ; ನೋಡಿದಡೆ = ಈ ಜಗತ್ತಿನತ್ತ ನೋಡಿದರೆ; ಮನದಲ್ಲಿ ಅಚ್ಚೊತ್ತಿದ = ಅದು ಸತ್ಯಸ್ಯಸತ್ಯವಾಗಿ ಕಾಣುತ್ತಿದ್ದಿತ್ತು; ವಿಚಾರಿಸಿ ನೋಡಿದಡೆ = ವಿವೇಕದಿಂದ, ಅನುಭಾವದಿಂದ ಗುರುತಿಸಿದರೆ;
Written by: Sri Siddeswara Swamiji, Vijayapura