Index   ವಚನ - 220    Search  
 
ಮಂಗಳಸೂತ್ರವ ಕಟ್ಟಲು ಆ ಮಂಗಳಸೂತ್ರಕ್ಕೆ ಮಣಿಯ ಪವಣಿಸಲು ಆ ಮಣಿಯ ದ್ವಯದ್ವಾರದಲ್ಲಿ ದಾರ ವಿದಾರವಾಯಿತ್ತು. ಆ ದ್ವಾರದ ಮಧ್ಯದಲ್ಲಿ ಬೆಳಗುದೋರಿತ್ತಯ್ಯ ಸಂಗಯ್ಯನಲ್ಲಿ ಹಿಂಗದ ಸುಖವ ಕಂಡೆನು.