Index   ವಚನ - 233    Search  
 
ಮಾಟವಿಲ್ಲದ ಸಮಯಾಚಾರವ ಮಾಡಹೋದೆ ಬಸವಾ. ಆ ಸಮಯಾಚಾರವನರಿದು ಕೂಡಿದೆ ಬಸವಾ. ಆ ಮಾಟ ಸುಯಿದಾನವಾಯಿತ್ತಯ್ಯಾ ಬಸವಾ. ಆ ಸುಯಿದಾನದ ಸುಖವನರಿಯಲು ಸಂಗಯ್ಯನಲ್ಲಿ ಬಸವನೊಂದೆ ರೂಪಾದ.