Index   ವಚನ - 236    Search  
 
ಮಾತಿನ ಹಂಗೇತಕ್ಕೆ, ಮನವೇಕಾಂತದಲ್ಲಿ ನಿಂದ ಬಳಿಕ, ಬಸವಯ್ಯಾ? ಅಜಾತನ ಒಲುಮೆ ಏತಕ್ಕೆ, ಅರ್ಪಿತದ ಹಂಗಹರಿದಬಳಿಕ, ಬಸವಯ್ಯಾ? ಎನಗೆ ಸಮಯಾಚಾರವಿನ್ನೇಕೆ, ಭಕ್ತಿಭಾವ ನಷ್ಟವಾದ ಬಳಿಕ, ಬಸವಯ್ಯಾ? ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ, ಸಂಗಯ್ಯಾ, ಬಸವ ಕುರುಹಿಲ್ಲದಮೂರ್ತಿಯಾದ ಕಾರಣ.