Index   ವಚನ - 237    Search  
 
ಮಾತಿಲ್ಲದವನ ಕೂಡೆ ಮಾತನಾಡ ಹೋದಡೆ, ಎನ್ನ ಮಾತಿನ ಪ್ರಸಂಗವ ನುಡಿಯಲೊಲ್ಲ ಬಸವಯ್ಯನು. ಮಾತಿನ ಹಂಗ ಹರಿದು, ಆ ಪ್ರಸಂಗದ ಸಂಗವ ಕೆಡಿಸಿ, ಪರವಶನಾಗಿ ನಿಲಲು ಬಸವಯ್ಯನು, ಸಂಗಯ್ಯನಲ್ಲಿ ಹೆಸರಿಲ್ಲದ ವೃಕ್ಷವನರಿದ ಬಸವಯ್ಯನು.