Index   ವಚನ - 238    Search  
 
ಮಾತಿಲ್ಲದ ಮಥನವ ಮಾಡಿ ಮೆರೆದೆ ಬಸವಾ. ನೀತಿಯಿಲ್ಲದೆ ನಿಜವ ತೋರಿ ಮೆರೆದೆ ಬಸವಾ. ಅನಿತನಿತು ತೃಪ್ತಿಯ ಮಾಡಿ ತೋರಿದೆಯಯ್ಯಾ. ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ.