Index   ವಚನ - 244    Search  
 
ಮುಖವಿಲ್ಲದ ಕನ್ನಡಿಯ ನೋಡಲು, ಆ ಕನ್ನಡಿಯ ರೂಪಿನೊಳಗೆ ಸಂಗಯ್ಯನ ರೂಪು ಕಾಣಬಂದಿತ್ತು. ಆ ರೂಪನರಿದು ಪರಿಣಾಮವ ಕಂಡು ಬದುಕಿದೆನಯ್ಯಾ. ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು. ಗಮನದಸಂಗ ನಿಸ್ಸಂಗವಾಗಿ ಎನಗಿರಪರವಿಲ್ಲವಯ್ಯಾ ಸಂಗಯ್ಯಾ.