Index   ವಚನ - 260    Search  
 
ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ. ಆ ಯತಿಗಳು ಅತಿ ವೀರ ಸಂಬಂಧಿಗಳಾಗಿರಲು ವೀರತತ್ವದ ನೆಲೆಯೊಂದೊಂದು ಸಂಗವನೈದಿ ಮುಖವಿಕಸಿತವಾಯಿತ್ತು. ಅಪ್ಪಣ್ಣ ತಂದ ಅಪ್ರತಿಮ ಶಿವಾಚಾರ ನೆಲೆಯಾಗಿರಲು ಆನು ಶಿವ ಶುಭವಂತಳಾದೆನಯ್ಯಾ. ಸಂಗಯ್ಯನಲ್ಲಿ ಬಸವನ ಭ್ರಮೆ ನಮಗೇಕಯ್ಯಾ.?