ಸಯದಾನವರತ ಬಸವಾ.ಸಂಭ್ರಮಮೂರ್ತಿ ಬಸವಾ.
ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ,
ಏಕರೂಪ ನಿರೂಪಾದೆಯಾ ಬಸವಾ?
ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ.
ಬಸವ ಬಯಲನೆಯ್ದಿ
ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ.
Art
Manuscript
Music
Courtesy:
Transliteration
Sayadānavarata basavā.Sambhramamūrti basavā.
Saṅga nis'saṅga basavā, ele ayyana ayya basavā,
ēkarūpa nirūpādeyā basavā?
Nis'saṅga ennalli rūpāyittu basavā.
Basava bayalaneydi
ānu bayalane kūḍidenayyā saṅgayyā.