Index   ವಚನ - 284    Search  
 
ಹೆಸರಿಲ್ಲದ ರೂಪ ಕಂಡು ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು. ಕುರುಹಿಲ್ಲದ ಮೂರ್ತಿಯ ಕಂಡು ಅದ್ವೈತಾನಂದಿಯಾದೆ ನಾನು. ಪ್ರಣವಜ್ಯೋತಿಷ್ಟವರ್ಣವ ತಿಳಿದು ಪರಂಜ್ಯೋತಿಲಿಂಗವಾದೆನಯ್ಯ ಸಂಗಯ್ಯ.